ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಪ್ರೇಮರಾಜ ಮನೆಯಲ್ಲಿ ಶೋಧ
ಹುಬ್ಬಳ್ಳಿ: ಕರಾವಳಿ ಕರ್ನಾಟಕದ ಮಂಗಳೂರು ನಗರದ ಹೊರವಲಯದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆಟೋದಲ್ಲಿ ಪ್ರೇಮರಾಜ್ ಎಂಬುವರ ಕಾರ್ಡ್ ಆಧಾರದ ಮೇಲೆ ಹುಬ್ಬಳ್ಳಿ ಪೊಲೀಸರು ನಗರದ ಮಧುರಾ ಕಾಲೋನಿಯ ಪ್ರೇಮರಾಜ್ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಪ್ರೇಮರಾಜ್ ತಂದೆ ಮಾರುತಿ ಹುಟಗಿ, ಘಟನೆಗೂ ನನ್ನ ಮಗನಿಗೂ ಯಾವುದೇ ಸಂಬಂಧವಿಲ್ಲ. ನನ್ನ ಮಗ ಅಮಾಯಕ, ಅವನು ಆರು ತಿಂಗಳ ಹಿಂದೆ ಆಧಾರ ಕಾರ್ಡ್ ಕಳೆದುಕೊಂಡಿದ್ದ. ಮಗನ ಆಧಾರ ದುರ್ಬಳಕೆ ಆಗಿದೆ. ನಿನ್ನೆ ಪೊಲೀಸರು ಬಂದು ನನ್ನ ಮಗನ ಬಗ್ಗೆ ಮಾಹಿತಿ ಕೇಳಿದ್ರು, ನಾನೂ...



















