ಯಮಕನಮರಡಿ : ಹಿಂದೂ ಪದದ ಅರ್ಥದ ಕುರಿತು ಹೇಳಿಕೆ ನೀಡಿದ್ದ ವಿವಾದದಲ್ಲಿ ಸಿಲುಕಿರುವ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿಯವರ ಪ್ರಕರಣವನ್ನು ತನ್ನ ರಾಜಕೀಯ ಲಾಭಕಾಗಿ ಬಳಸಿಕೊಳ್ಳವ ಯತ್ನದ ಭಾಗವಾಗಿ ಬಿಜೆಪಿ ವಿಧಾನಸಭಾ ಕ್ಷೇತ್ರ ಯಮಕನಮರಡಿಯಲ್ಲಿ ಹಿಂದೂ ಸಂಘಟನೆಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ.
ನಾಳೆ ಬುಧವಾರ  ಸಂಜೆ 5 ಘಂಟೆಗೆ ನಾನು ಹಿಂದೂ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಖ್ಯ ಭಾಷಣಕಾರರಾಗಿ ಯುವ ಬ್ರಿಗೇಡ್ ಮುಖ್ಯಸ್ಥ, ಚಕ್ರವರ್ತಿ ಸೂಲಿಬೆಲೆ ಆಗಮಿಸುತ್ತಿದ್ದಾರೆ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸನಿಂದ ಸೋಲಿಸಲ್ಪಟ್ಟಿರುವ ಬಿಜೆಪಿಯ ಮಾರುತಿ ಅಷ್ಟಗಿ, ಹಿಂದೂಗಳ ಭಾವನೆಗೆ ದಕ್ಕೆ ಉಂಟುಮಾಡಿರುವ ಶಾಸಕ ಸತೀಶ್ ಜಾರಕಿಹೊಳಿ ಅವರಿಗೆ ಹಿಂದೂತ್ವದ ಶಕ್ತಿ ಸಾಮರ್ಥ್ಯ ತೋರಿಸುವ ನಿಟ್ಟಿನಲ್ಲಿ ತಾವು ಕಾರ್ಯಕ್ರಮ ಏರ್ಪಡಿಸಲಾಗಿರುವುದಾಗಿ ತಿಳಿಸಿದ್ದಾರೆ.
 
			









