Crime NewsKannada News

ಒಂದೇ ದಿನ ನಾಲ್ಕು ಅಂಗಡಿಗೆ ಕನ್ನ ಹಾಕಿದ ಖದೀಮರು

ರಾಮದುರ್ಗ ತಾಲೂಕಿನಲ್ಲಿ ದಿನೇ ದಿನೇ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ ಒಂದೇ ದಿನ ನಾಲ್ಕು ಅಂಗಡಿಗೆ ಕನ್ನ ಹಾಕಿ ಕದೀಮರು ಪರಾರಿಯಾದ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸುರೇಬಾನ-ಮನಿಹಾಳ ಅವಳಿ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ ಈ ರೀತಿ ಪದೇ ಪದೇ ಕಳ್ಳತನವಾಗುತ್ತಿರುವದರಿಂದ ಅಂಗಡಿಕಾರರು ಹಾಗೂ ಸಾರ್ವಜನಿಕರು ಆತಂಕಕೊಳಗಾಗಿದ್ದಾರೆ ಅವಳಿ ಗ್ರಾಮವೆಂದು ಕರಿಯಲ್ಪಡುವ ಸುರೇಬಾನ ಮನಿಹಾಳ ಗ್ರಾಮದಲ್ಲಿ ಹಾರ್ಡ್ವೇರ್ ಶಾಪ್, ಎಲೆಕ್ಟ್ರಿಕಲ್ ಶಾಪ್, ವೈನ್ ಶಾಪ್, ಕಿರಾಣಿ ಶಾಪ್ ಸೇರದಂತೆ ಒಟ್ಟು ನಾಲ್ಕು ಅಂಗಡಿಗಳ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ ಕಳ್ಳತನವೆಸಗಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಘಟನಾ ಸ್ಥಳಕ್ಕೆ ತಾಲೂಕಿನ ಸುರೇಬಾನ ಉಪ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Belgaum Express News Desk

Leave a Reply

error: Content is protected !!
%d bloggers like this: