Crime NewsKannada News

ಕಾಲವೆಯಲ್ಲಿ ಕಾಲು ಜಾರಿ ಓರ್ವ ಯುವಕ ಬಿದ್ದಾಗ ಅವನನ್ನು ರಕ್ಷೀಸಲು ಹೋಗಿ ಇನ್ನೂರ್ವ ಅಸುನೀಗಿರುವ ದುರ್ಘಟನೆ

ಹೌದು ಕಾಲು ಜಾರಿ ಕಾಲುವೆಗೆ ಬಿದ್ದು ಇಬ್ಬರು ಯುವಕರ ಸಾವು
ಕೈ ಕಾಲು ತೊಳೆಯಲು ಕಾಲುವೆಗೆ ಇಳಿದು ಕಾಲು ಜಾರಿದ್ದರಿಂದ ಯುವಕನೋರ್ವ ಕಾಲುವಿಗೆ ಬಿದ್ದಿದ್ದಾನೆ ಆತನನು ರಕ್ಷಿಸಲು ಹೋದ ಇನ್ನೊಬ್ಬ ಸಹಪಾಠಿ ಸೇರಿ ಇಬ್ಬರು ಅಸುನಿಗಿರುವ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕಟಕೋಳ ಸಮೀಪದ ತೋರಣಗಟ್ಟಿ ಗ್ರಾಮದ ಹತ್ತಿರ ನಡೆದಿದೆ ಕಾಲುವೆಗೆ ಬಿದ್ದು ಅಸೂನಿಗಿರುವ ಯುವಕರು 22 ವರ್ಷದ ಪ್ರಕಾಶ ಬಡಕಲೂರ ಹಾಗೂ 18 ವರ್ಷದ ಬಸಪ್ಪ ಕಠಮಳ್ಳಿ ಎಂದು ಹೇಳಲಾಗಿದೆ ಇಬ್ಬರು ಕಬ್ಬು ಕಟಾವು ಮಾಡಿ ಮರಳಿ ಮನೆಗೆ ಹೋಗುವಾಗ ಬಾಳೆಕುಂದ್ರಿ ಕಾಲುವೆಯಲ್ಲಿ ಕೈ ಕಾಲು ತೊಳೆದು ಕೊಳ್ಳುವದಕ್ಕಾಗಿ ಕಾಲುವೆಯಲ್ಲಿ ಇಳಿದಿದ್ದು ಆಕಸ್ಮಿಕವಾಗಿ ಕಾಲು ಜಾರಿ ಓರ್ವ ಯುವಕ ಬಿದ್ದಾಗ ಅವನನ್ನು ರಕ್ಷೀಸಲು ಹೋಗಿ ಇನ್ನೂರ್ವ ಅಸುನೀಗಿರುವ ದುರ್ಘಟನೆ ಸಂಭವಿಸಿದೆ ಸ್ಥಳಕ್ಕೆ ರಾಮದುರ್ಗ ತಾಲೂಕಿನ ಕಟಕೋಳ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ

Belgaum Express News Desk

Leave a Reply

error: Content is protected !!
%d bloggers like this: