Kannada NewsPolitics

ಕಾಂಗ್ರೆಸ್ ನಾಯಕರ ವಿರುದ್ಧ ಬೆಳಗಾವಿಯಲ್ಲಿ ಬಿಜೆಪಿ ನಾಯಕರ ಜಂಟಿ ಸುದ್ದಿಗೋಷ್ಠಿ‌

ಬೆಳಗಾವಿ ಸಂಸದೆ ಮಂಗಲ ಅಂಗಡಿ, ಶಾಸಕ ಅನಿಲ್ ಬೆನಕೆ

ಬಿಜೆಪಿ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಸಂಜಯ್ ಪಾಟೀಲ್

ರಾಜ್ಯ ಬಿಜೆಪಿ ವಕ್ತಾರ ಎಂ.ಬಿ.ಜಿರಲಿ ಸೇರಿ ಹಲವರು ಉಪಸ್ಥಿತಿ

ಕಾಂಗ್ರೆಸ್ ವಿರುದ್ಧ ರಾಜ್ಯ ಬಿಜೆಪಿ ವಕ್ತಾರ ಎಂ.ಬಿ.ಜಿರಲಿ ವಾಗ್ದಾಳಿ

ಹಲವು ವರ್ಷಗಳ ಬಳಿಕ ಕಾಂಗ್ರೆಸ್ ನಾಯಕರಿಗೆ ಪ್ರಜೆಗಳ ನೆನಪಾಗಿದೆ

ಯಾವ ಪ್ರಜಾಧ್ವನಿ ಮರೆತರೋ ಅವರಿಗೆ ಪ್ರಜೆಗಳ ನೆನಪಾಗಿರೋದು ಹಾಸ್ಯಾಸ್ಪದ

ಹಲವಾರು ವರ್ಷ ಕೇಂದ್ರ ರಾಜ್ಯದಲ್ಲಿ ಡಬಲ್ ಇಂಜಿನ್, ತ್ರಿಬಲ್ ಇಂಜಿನ್ ಸರ್ಕಾರ ಇತ್ತು

ಆಗ ಗಡಿವಿವಾದ ಬಗ್ಗೆ ಬೆಂಕಿ ಹಚ್ಚಿದ್ರು,

ಪ್ರಜೆಗಳನ್ನೆ ಮರೆತು ಸಂಸತ್‌‌ನಲ್ಲಿ 40 ಸೀಟ್ ಗೆ ಬಂದವರಿಗೆ ಈಗ ಪ್ರಜೆಗಳು ನೆನಪಾಗಿದೆ

ಕಾಂಗ್ರೆಸ್ ತ್ರೀಬಲ್ ಇಂಜಿನ್ ಸರ್ಕಾರ ಇದ್ದಾಗ ಗಡಿಯಲ್ಲಿ ಕಿಡಿ ಹಚ್ಚಿದ್ದರು

ಮಹದಾಯಿ ಯೋಜನೆ ಅನುಷ್ಠಾನ ಬಿಜೆಪಿ ಸರ್ಕಾರ ಮಾಡಿದೆ

ಇವತ್ತು ಡಿ.ಕೆ.ಶಿವಕುಮಾರ್ ಅವರೇ ಈಗ 200 ಯುನಿಟ್ ವಿದ್ಯುತ್ ಉಚಿತ ಕೊಡ್ತಿವಿ ಅಂತಾ ಹೇಳ್ತಿದ್ದಿರಿ

ನಾವು ಕೇಳ್ತಿವಿ ನೀವು ಇಂಧನ ಸಚಿವರಾಗಿದ್ದಾಗ ಏನು ಮಾಡಿದ್ರಿ?

ಚುನಾವಣೆ ಗಿಮಿಕ್ ಮಾಡಲು ಈಗ ಹೊರಟಿದ್ದಿರಿ

ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸನವರು ಯಾರೂ ಈಗ ಉಳಿದಿಲ್ಲ

ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ನಮ್ಮೆಲ್ಲರ ಹಿರಿಯರು ಪಾಲ್ಗೊಂಡಿದ್ದರು

ನೀವು ಇಡಿ ಗಿರಾಕಿಗಳು, ಭಯೋತ್ಪಾದಕರ ಪರ ಮಾತಾಡೋ ಗಿರಾಕಿಗಳು

ಮಂಗಳೂರು ಕುಕ್ಕರ್ ಸ್ಫೋಟದಲ್ಲಿ ಆರೋಪಿ ಬೆಂಬಲಿಸಿ ಮಾತನಾಡುತ್ತಿದ್ದಿರಿ

ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮಾಡುತ್ತಿದ್ದಿರಿ

ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಯೋಗಿ ಆದಿತ್ಯನಾಥ ಬಗ್ಗೆ ಹೇಳಿಕೆ ವಿಚಾರ

ಸಿ.ಎಂ.ಇಬ್ರಾಹಿಂ ನಾಲ್ಕು ಬಸವಣ್ಣ ವಚನಗಳ ಬಾಯಿಪಾಠ ಮಾಡಿದ್ದಾರೆ

ನಾಲಿಗೆಯನ್ನ ಸ್ವಚ್ಛ ಮಾಡಿಕೊಂಡು ಮಾತನಾಡಿ

ಯೋಗಿ ಆದಿತ್ಯನಾಥರು ನಾಥಪಂಥದವರು

ರಾಜಕಾರಣ ಮಾತನಾಡುವಾಗ ಹರಕು ಬಾಯಿ ಹರಿಬಿಡಬೇಡಿ

ಗಡಿ ವಿವಾದವನ್ನ ಸೃಷ್ಟಿ ಮಾಡಿದ್ದೆ ಕಾಂಗ್ರೆಸ್ ನವರು

ಆಗ ಕೇಂದ್ರ , ರಾಜ್ಯ ಮತ್ತು ಕೇರಳದಲ್ಲಿ ಕಾಂಗ್ರೆಸ್ ಸರ್ಕಾರವೇ ಇತ್ತು

ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದಾಗ ಕರ್ನಾಟಕ ಕತ್ತಲೆ ರಾಜ್ಯವಾಗಿತ್ತು

ನಾವು ಉಚಿತ ವಿದ್ಯುತ್ ಕೊಡುವುದಕ್ಕೆ ಬಿಜೆಪಿ ವಿರೋಧಿಸುತ್ತಿಲ್ಲ

ಆದ್ರೆ ನೀವು ಇದ್ದಾಗ ಏನು ಮಾಡಿದೀರಿ ಎಂದು ಎಂ.ಬಿ.ಜಿರಲಿ ಪ್ರಶ್ನೆ

Belgaum Express News Desk

Leave a Reply

error: Content is protected !!
%d bloggers like this: