Kannada News

ಬೈಲಹೊಂಗಲ ನಗರದಲ್ಲಿ ಕ್ವೀನ್ಸ್ ಟಚ್ ಅಕಾಡೆಮಿ ಉದ್ಘಾಟನೆ

ಕೋಮಲ್ ಚೌಗ್ಲೆ ಅವರು ಹಳೆಯ ಪ್ರೇರಣಾ ಸ್ಕೂಲ್ ಬಾಗವಾನ ಗಲ್ಲಿ, ಬೈಲಹೊಂಗಲಲ್ಲಿ ಕ್ವೀನ್ಸ್ ಟಚ್ ಅಕಾಡೆಮಿ ಬ್ಯೂಟಿ ಪಾರ್ಲರ್ ಮತ್ತು ಅಕಾಡೆಮಿಯನ್ನು ಉದ್ಘಾಟಿಸಿದರು. ಇಲ್ಲಿ ಮೇಕಪ್, ಹೇರ್ ಕಟಿಂಗ್, ಮೆಹಂದಿ, ವಧುವಿಗೆ ಅಲಂಕಾರ ಮಾಡುವ ಕೆಲಸದ ಜತೆಗೆ ಅದರ ತರಬೇತಿಯನ್ನೂ ನೀಡಲಾಗುವುದು. ಕ್ವೀನ್ಸ್ ಟಚ್ ಅಕಾಡೆಮಿಯ ಸಂಚಾಲಕರಾದ ಹೀನಾ ವಡಗಾಂವ್ಕರ್ ಇವರು ಮಾತನಾಡಿ, ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ ಇದನ್ನು ಆರಂಭಿಸಲಾಗಿದೆ. ಗ್ರಾಮೀಣ ಭಾಗದ ಮಹಿಳೆಯಾರಿಗಾಗಿ ಇಂತಹ ತರಬೇತಿ ಕೇಂದ್ರಗಳು ಲಭ್ಯವಿಲ್ಲದ ಕಾರಣದಿಂದ ಆಸಕ್ತಿ ಇದ್ದುರೂ ಸಹ ಇವರು ಹಿಂಜರಿಯುತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಬೈಲಹೊಂಗಲದಲ್ಲಿ ಕ್ವೀನ್ಸ್ ಟಚ್ ಅಕಾಡೆಮಿಯನ್ನು ಆರಂಭಿಸಿದ್ದೇವೆ. ಮತ್ತು ಗ್ರಾಹಕರಿಗೆ ಉತ್ತಮ ಸೇವೆ ನೀಡುವುದೊಂದೇ ನಮ್ಮ ಗುರಿಯಾಗಿದೆ ಎಂದು ನಮ್ಮ ಸುದ್ದಿ ವಾಹಿನಿ ಬೆಳಗಾವಿ ಎಕ್ಸ್ಪ್ರೆಸ್ ಮೂಲಕ ತಿಳಿಸಿದರು. ಈ ಸಂದರ್ಭದಲ್ಲಿ ಕೋಮಲ್ ಚೌಗ್ಲೆ, ಪ್ರಿಯಾಂಕಾ ನಾಯ್ಕ್, ಶ್ವೇತಾ ಮೇಡಂ ಮತ್ತಿತರರು ಉಪಸ್ಥಿತರಿದ್ದರು.

Belgaum Express News Desk

Leave a Reply

error: Content is protected !!
%d bloggers like this: