ರಮೇಶ ಜಾರಕಿಹೊಳಿ ಆರು ಸಾವಿರ ಹಣ ಕೊಟ್ಟರೆ ನಂಗೆ ಓಟ ಮಾಡಿ ಎಂಬ ವಿಚಾರವಾಗಿ, ಯಾರೋ ಏನು ಹೊರಗಡೆ ಭಾಷಣ ಮಾಡಿದ್ದನ್ನು ಅದನ್ನು ಕಾನೂನಾತ್ಮಕವಾಗಿ ರಾಜಕೀಯ ಭಾಷಣಗಳನ್ನು ಪರಿಶೀಲನೆ ಮಾಡಲಿಕ್ಕೆ ಕಷ್ಟವಾಗುತ್ತದೆ. ದಿನ ಸಿದ್ದರಾಮಯ್ಯ ಅವರು ಭಾಷಣ ಮಾಡುತ್ತಲೇ ಇರುತ್ತಾರೆ. ಎಲ್ಲ ಪ್ರೀ ಮಾಡ್ತಿನಿ ರಾಜ್ಯನೇ ಪ್ರೀ ಮಾಡ್ತಿನಿ ಅಂತ, ಅದಕ್ಕೇಲ್ಲ ಪೊಲೀಸ್ ಕಂಪ್ಲೆಂಟ್ ಕೋಡೋದು ಮೇಚ್ಯುರಿಟಿ ಇಲ್ಲದವರ ಕೆಲಸ, ಹಣ ಹಂಚುವಾಗ ಹೋಗಿ ಹಿಡಿದು ಕೇಸ್ ಕೋಟ್ಟರೆ ಅದಕ್ಕೆ ಬೆಲೆ ಇದೆ ಎಂದು ಬೆಳಗಾವಿ ಉಸ್ತುವಾರಿ ಸಚಿವ ಗೋವಿಂದ ಕಾರಜೊಳ ಹೇಳಿದರು.
ಹಣ ಹಂಚುವ ವಿಚಾರವಾಗಿ ಭಾರತ ಸರ್ಕಾರದ ಚುನಾವಣೆ ಆಯೋಗ ಅದನ್ನು ನಿಯಂತ್ರಣ ಮಾಡುತ್ತೆ ಅದಕ್ಕೆ ಎಲ್ಲೋ ಅವಕಾಶ ಇಲ್ಲ. ಡಿಕೆಸಿ, ಸಿದ್ದರಾಮಯ್ಯ ಏನೇನೋ ಮಾತನಾಡುತ್ತಾರೆ ಒಟ್ಟಾರೆಯಾಗಿ ಯಾರೇ ಮಾತನಾಡಿದರು, ನಾನು ಮಾತನಾಡಿದರು ಮಾತಿನ ಮೇಲೆ ಹಿಡಿತ ಇಟ್ಟುಕೊಂಡು ಮಾತನಾಡಬೇಕು ಎಂದು ಅವರು ತಿಳಿಸಿದರು.