Kannada News

ಗ್ರಾಮೀಣ ಪ್ರದೇಶದ ಜನತೆಗಿಂದು ಬದಲಾದ ಕಾನೂನಿನ ಅರವು ಮೂಡಿಸುವ ಕೆಲಸ ಮಾಡಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ಮುಸ್ತಫಾ ಹುಸೇನ ಸಯ್ಯದ್ ಅಜೀಜ್ ಹೇಳಿಕೆ

ಹೌದು ಬೆಳಗಾವಿ ಜಿಲ್ಲೆ ರಾಮದುರ್ಗ ದೇಶದಲ್ಲಿಂದು ಹೊಸ ಹೊಸ ಕಾನುನೂಗಳ ಬಂದಿದ್ದು, ಅವುಗಳನ್ನು ತ್ವರಿತವಾಗಿ ವಿಲೇವಾರಿಗೊಳಿಸುವ ನಿಟ್ಟಿನಲ್ಲಿ ಬೇರೆ ಬೇರೆ ನ್ಯಾಯಾಲಯದ ಅವಶ್ಯಕತೆ ಇದ್ದು, ಆ ನಿಟ್ಟಿನಲ್ಲಿ ನೂತನ ಕಟ್ಟಡ ಪೂರ್ಣಗೊಂಡರೆ ಸಾಕಷ್ಟು ಅನುಕೂಲವಾಗಲಿದೆ ಎಂದು ಜಿಲ್ಲಾ ಸತ್ರ ನ್ಯಾಯಾಧೀಶರಾದ ಮುಸ್ತಫಾ ಹುಸೇನ ಸಯ್ಯದ್ ಅಜೀಜ್ ಹೇಳಿದರು.

ಪಟ್ಟಣದ ಹೊರವಲಯದ ಬಸವೇಶ್ವರ ವೃತ್ತದ ಹತ್ತಿರ ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ ಮತ್ತು ವಕೀಲರ ಸಂಘದಿಂದ ಹಮ್ಮಿಕೊಂಡ ನ್ಯಾಯಾಲಯದ ನೂತನ ಕಟ್ಟಡದ ಭೂಮಿ ಪೂಜಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ಜನತೆಗಿಂದು ಬದಲಾದ ಕಾನೂನಿನ ಅರವು ಮೂಡಿಸುವ ಕೆಲಸವನ್ನು ನ್ಯಾಯವಾದಿಗಳು ಮಾಡಬೇಕಾದ ಅವಶ್ಯಕತೆ ಇದೆ. ಹೊಸ ಹೊಸ ಕಾಯ್ದೆಗಳು ಬಂದಂತೆ ವ್ಯಾಜ್ಯಗಳ ಸಂಖ್ಯೆ ಹೆಚ್ಚಾಗಲಿದೆ. ಅಂತಹ ಸಂದರ್ಭದಲ್ಲಿ ವ್ಯಾಜ್ಯಗಳ ತ್ವರಿತ ಇತ್ಯರ್ಥಕ್ಕಾಗಿ ಹೈಕೋರ್ಟ ಬೇಕಾದ ಸೌಕರ್ಯಗಳನ್ನು ಒದಗಿಸುವ ಕೆಲಸ ಮಾಡಲಿದೆ ಎಂದು ಹೇಳಿದರು.

ನಮ್ಮನ್ನು ನಂಬಿ ಬಂದಿರುವ ಕಕ್ಷಿದಾರರಿಗೆ ಅನ್ಯಾಯವಾಗದ ರೀತಿಯಲ್ಲಿ ವಕೀಲರು ಕೆಲಸ ಮಾಡಬೇಕು. ಇಂದು ಸಮಾಜದಲ್ಲಿ ಎಷ್ಟೋ ಜನರು ಕೋರ್ಟ ಬರಲು ಹಿಂದೆಟು ಹಾಕುತ್ತಾರೆ. ವಕೀಲರು ಅವರಿಗೆ ನ್ಯಾಯಾಂಗದಿಂದ ಸಿಗುವಂತ ಸವಲತ್ತುಗಳು ಹಾಗೂ ನ್ಯಾಯ ಭರವಸೆ ಸಿಕ್ಕರೆ ಅವರು ಮುಂದೆ ಬಂದು ತಮ್ಮ ದೂರು ಸಲ್ಲಿಸುವ ಸಾದ್ಯತೆಗಳು ಇವೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ, ಅಂದಿನ ಜನಸಂಖ್ಯೆಯ ಅನುಗುಣವಾಗಿ ನಿರ್ಮಾಣಗೊಂಡ ಕೋರ್ಟ ಸುಮಾರು ೧೫೦ ವರ್ಷಗಳಾಗಿವೆ. ಇಂದು ಹೆಚ್ಚಿನ ಜನ ಸಂಖ್ಯೆ ಹಾಗೂ ಸಾಕಷ್ಟು ವ್ಯಾಜ್ಯಗಳು ಇರುವ ಕಾರಣ ರಾಮದುರ್ಗ ತಾಲೂಕಿನಲ್ಲಿ ವಿವಿಧ ನ್ಯಾಯಾಲಯಗಳ ಒಳಗೊಂಡ ಹೊಸ ಕೋರ್ಟ ಅವ್ಯಕತೆ ಇತ್ತು. ಅದನ್ನು ಮನಗಂಡು ಸರಕಾರದ ಮೇಲೆ ಒತ್ತಡ ತಂದು ಕಟ್ಟಡ ನಿರ್ಮಾಣಕ್ಕೆ ಶ್ರಮಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ೧ ನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಧೀಶರಾದ ಪವನೇಶ ಡಿ, ೨ ನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಧೀಶರಾದ ಹರೀಶ್ ಎ, ರಾಜ್ಯ ಉಚ್ಚ ನ್ಯಾಯಾಲಯದ ವಿಲೇಖನಾಧಿಕಾರಿ ಸಯಿದುನ್ನಿಸಾ, ಹಿರಿಯ ದಿವಾಣಿ ನ್ಯಾಯಾಧೀಶರಾದ ಹನುಮಂತ ಜಿ.ಎಚ್., ಪಿಡಬ್ಲೂಡಿ ಸಹಾಯಕ ಕಾರ್ಯ ನಿರ್ವಾಹಕ ಅಧಿಕಾರಿ ರವಿಕುಮಾರ ನಂದಿಹಳ್ಳಿ ಸೇರಿದಂತೆ ಇತರ ಜಿಲ್ಲಾ ನ್ಯಾಯಾಧೀಶರು ಉಪಸ್ಥಿತರಿದ್ದರು.
ನ್ಯಾಯವಾಧಿಗಳ ಸಂಘದ ಅಧ್ಯಕ್ಷ ಆರ್.ಜಿ. ವಜ್ರಮಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಎ.ಎ. ಮುದಕವಿ ಸ್ವಾಗತಿಸಿದರು. ಎಸ್.ಎಸ್. ಮಾತನವರ ನಿರೂಪಿಸಿದರು. ಉಪಾಧ್ಯಕ್ಷ ವಿ.ಬಿ. ಸಿದ್ದಾಟಗಿಮಠ ವಂದಿಸಿದರು.

Belgaum Express News Desk

Leave a Reply

error: Content is protected !!
%d bloggers like this: