ವಿದ್ಯುತ್ ಇಲಾಖೆಯ ಕೆಲಸಗಾರ ಇಲಾಖೆ ಆವರಣದಲ್ಲಿ ನೇಣಿಗೆ ಶರಣು
ವಿದ್ಯುತ್ ಇಲಾಖೆಯ ಕೆಲಸಗಾರ ಇಲಾಖೆ ಆವರಣದಲ್ಲಿ ನೇಣಿಗೆ ಶರಣು.. ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದಲ್ಲಿ ಜರುಗಿದ ಘಟನೆ.... ಮಂಜುನಾಥ್ ಮುತ್ತಗಿ ಮೃತ ದುರ್ದೈವಿ ಎಂದು ತಿಳಿದುಬಂದಿದೆ.. ಗುತ್ತಿಗೆ ಆಧಾರದ ಮೇಲೆ ವಿದ್ಯುತ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ವಿದ್ಯುತ್ ಕಂಬಗಳು ನೆಡುವ ಟ್ರ್ಯಾಕ್ಟರ್ ಗೆ ನೇಣು ಹಾಕಿಕೊಂಡು ಯುವಕ.... ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ನೇಣು ಹಾಕಿಕೊಳ್ಳಲು ಕಾರಣ ಏನೆಂದು ತಿಳಿದುಬಂದಿಲ್ಲ... ಸ್ಥಳಕ್ಕೆ ಪೋಲಿಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ...









