Kannada News

ರಮೇಶ ಜಾರಕಿಹೊಳಿ ಅವರು ಜನರಿಗೆ ಹೆದರಿಸಿ ಗೆಲವು ಸಾಧಿಸಿದ್ದಾರೆ ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಆರೋಪ

ಮಾಜಿ‌ ಸಚಿವ ರಮೇಶ ಜಾರಕಿಹೊಳಿ ಅವರು ಹಣ ಹಂಚಿ ಗೆಲವು ಸಾಧಿಸಿಲ್ಲ ಎನ್ನುವ ಹೇಳಿಕೆ ಹಾಸ್ಯಾಸ್ಪದ ಎಂದು ಗೋಕಾಕ ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಆರೋಪಿಸಿದರು

ಗೋಕಾಕ ಚುನಾವಣೆಯಲ್ಲಿ ಹಣ, ದರ್ಪ, ಅಧಿಕಾರದ‌ ಮದದಿಂದ ಗೆಲವು ಸಾಧಿಸಿಕೊಂಡು ಬಂದಿದ್ದಾರೆ. ಅಲ್ಲದೆ, ಗೋಕಾಕ ಚುನಾವಣೆಯಲ್ಲಿ ಜನರೇ ನನ್ನ ಪರ ಪ್ರಚಾರ ನಡೆಸಿ‌ ಗೆಲ್ಲಿಸಿದ್ದಾರೆ ಎಂದು ಹೇಳಿಕೆ ಬಾಲಿಷ್ ಹೇಳಿಕೆ ಎಂದರು.

ಅವರ ಹೇಳಿಕೆ ನೀಡಿರುವುದು ಖಂಡಿಸುತ್ತೇನೆ. ಅವರು ಪ್ರಾಮಾಣಿಕರಾಗಿದ್ದರೆ ಕೊಲ್ಲಾಪುರ ಮಹಾಲಕ್ಷ್ಮೀ ಮೇಲೆ ಆಣೆ ಮಾಡಿ ಸಿಡಿ ಪ್ರಕರಣದಲ್ಲಿ ಸಿಲುಕಿದ ಸಂದರ್ಭದಲ್ಲಿ ನಾನು ಅವನಲ್ಲ‌ ಎಂದಿದ್ದರು. ಆಮೇಲೆ ನಾನೇ ಅನ್ನುತ್ತಾರೆ. ಅವರಿಗೆ ಆಣೆ ಪ್ರಮಾಣ ಮಾಡಲು ಹೇಳುವುದಿಲ್ಲ. ನನಗೆ ಆಣೆ ಮಾಡಿ‌ ನಾನು ಹಣ ಹಂಚಿ ಗೆಲುವು ಸಾಧಿಸಿದ್ದೇನೆ ಎಂದರೆ ನಾನು ಮಾಡಲು ಸಿದ್ಧ ಎಂದು ಸವಾಲ್ ಹಾಕಿದರು.

Belgaum Express News Desk

Leave a Reply

error: Content is protected !!
%d bloggers like this: