Kannada NewsPolitics

ರಾಜ್ಯದಲ್ಲಿ ಮಾಯವಾದ ಮೋದಿ ಹವಾದಿಂದ ಕಮಲ ಬಾಡಿ ಹೋಗಿದೆ : ಸತೀಶ ಜಾರಕಿಹೊಳಿ

ರಾಜ್ಯದಲ್ಲಿ ಬಿಜೆಪಿ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಂಡು ಜನರ ಮುಂದೆ ಪೊಳ್ಳು ಭರವಸೆಗಳನ್ನ ಇರಿಸುತ್ತಿದೆ. ಮುಂಬರುವ 2023 ರ ಚುನಾವಣೆಯಲ್ಲಿ ಮತದಾರರು ಸಂಪೂರ್ಣ “ಕೈ” ಹಿಡಿಯಲಿದ್ದಾರೆ. ಸದ್ಯ ಕರ್ನಾಟಕದಲ್ಲಿ ಬಿಜೆಪಿ ಹವಾ ಮಾಯವಾಗಿದೆ. ಈಗ್‌ ರಾಜ್ಯದಲ್ಲಿ ಬಿಜೆಪಿ ಮುಖಂಡರು ಬಾಡಲಿರುವ ಕಮಲಕ್ಕೆ ನೀರು ಸಿಂಪರಿಸುವ ಕಾರ್ಯ ಮಾಡುತ್ತಿದ್ದಾರೆ, ಇವರ ಸರ್ಕಸ್‌ .. ಸಕಸ್ಸ್‌ ಆಗಲ್ಲ ಎಂದು ಬಿಜೆಪಿ ವಿರುದ್ಧ ವ್ಯಂಗ್ಯವಾಡಿದರು.

ಹಿಂದೆ ಬಿಜೆಪಿ ಸರ್ಕಾರ ರಾಜ್ಯದ ಮೇಲೆ ಸಾಕಷ್ಟು ಸಾಲದ ಭಾರವನ್ನ ಇರಿಸಿ ಹೋಗಿತ್ತು. ನಂತರ ಸಿದ್ದರಾಮಯ್ಯನವರ ಸರ್ಕಾರ ಬಂದ ಬಳಿಕ ಬಿಜೆಪಿ ಮಾಡಿದ ಸಾಲವನ್ನು ತಿರಿಸುವ ಕೆಲಸ ಮಾಡಲಾಗಿದೆ. 1. ಕೋಟಿ 25 ಲಕ್ಷ ಮನೆಗಳಿಗೆ 200 ಯೂನ್ಯಿಟ್‌ ಉಚಿತ ವಿದ್ಯುತ್‌ಗೆ 9 ಸಾವಿರ ಕೋಟಿ ರೂ. ನಮ್ಮ ಸರ್ಕಾರಕ್ಕೆ ಯಾವುದೇ ಹೊರೆ ಆಗುತ್ತಿವುದಿಲ್ಲ ಎಂದ ಅವರು, ವರ್ಷಕ್ಕೆ 9 ಸಾವಿರ ಕೋಟಿ ರೂ. ಬಡವರ ಬೆಳಕಿಗಾಗಿ ಖರ್ಚು ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

Belgaum Express News Desk

Leave a Reply

error: Content is protected !!
%d bloggers like this: