Kannada News

ಸಹಕಾರಿ ಬ್ಯಾಂಕ್ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳು ರೈತರ ಮೇಲೆ ದೌರ್ಜನ್ಯ ಮಾಡುತ್ತಿವೆ : ಶಿವಣಸಿಂಗ್ ಮೊಖಾಸಿ

ರಾಜ್ಯದ ರೈತರಿಗೆ ಸಹಕಾರಿ ಬ್ಯಾಂಕ್ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳು ರೈತರ ಮೇಲೆ ದೌರ್ಜನ್ಯ ಮಾಡುತ್ತಿವೆ ಈ ವಿಚಾರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ರಮ ವಹಿಸಬೇಕು ಎಂದು ಸ್ವಾಭಿಮಾನಿ ರಾಜ್ಯ ರೈತ ಸಂಘದ ಅಧ್ಯಕ್ಷ ಶಿವಣಸಿಂಗ ಮೊಖಾಶಿ ತಿಳಿಸಿದರು.

ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಡಿಗೇರಿ ಗ್ರಾಮದ ರುದ್ರಪ್ಪ ಗೋಪಾಲ ಮೇಳೆದ ಎಂಬ ರೈತನು ಪಾಶ್ಚಾಪುರ ಸಹಕಾರಿ ಬ್ಯಾಂಕಿನಲ್ಲಿ ಪಡೆದಿದ್ದ 3 ಲಕ್ಷ ರೂ. ಸಾಲಕ್ಕೆ 5 ಲಕ್ಷ ರೂ. ತುಂಬಿಸಿಕೊಂಡಿದ್ದಾರೆ. ಆದರೆ ಈಗ ಬ್ಯಾಂಕಿನವರು ಆ ರೈತನಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದು, ಹರಾಜು ನೋಟಿಸ್ ಕೊಟ್ಟು, ಹೊಲದ ಮೇಲೆ ಹರಾಜು ತೆಗೆದಿದ್ದಾರೆ. ಇದರಿಂದ ಬೇಸತ್ತಿರುವ ರೈತ ರುದ್ರಪ್ಪ ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧನಾಗಿದ್ದಾನೆ. ಹೀಗಾಗಿ ತಕ್ಷಣವೇ ಜಿಲ್ಲಾಡಳಿತ, ಸರಕಾರ ಎಚ್ಚೆತ್ತುಕೊಂಡು ಬ್ಯಾಂಕಿನವರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿ ರೈತರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸಿದರು.

Belgaum Express News Desk

Leave a Reply

error: Content is protected !!
%d bloggers like this: